WhatsApp New Policy Update | ಎಚ್ಚರ! ವಾಟ್ಸಪ್ ಹೊಸ ಅಪ್ಡೇಟ್!

Published Jan 14 2021

flipkart

whatsapp-new-privacy-policy-in-kannada

ವಾಟ್ಸಾಪ್ ನ ಹೊಸ ಪ್ರೈವಸಿ ಮತ್ತು ಪಾಲಿಸಿ ಅಪ್ಡೇಟ್ !! ಫೆಬ್ರವರಿ 8 ರ ನಂತರ ವಾಟ್ಸಾಪ್ ಡಿಲೀಟ್! ಪರ್ಯಾಯ ಆಪ್ ಗಳು.

ವಾಟ್ಸಾಪ್ ನ ತನ್ನ ಹೊಸ ಪ್ರೈವಸಿ ಪಾಲಿಸಿ ಅಪ್ಡೇಟ್ ಇಂದಾಗಿ ತನ್ನ ಬಹಳಷ್ಟು ಬಳಕೆದಾರರನ್ನು ಕಳೆದುಕೊಂಡಿದೆ. ವಾಟ್ಸಾಪ್ ನ ಈ ಹೊಸ ರೂಲ್ಸ್ ಗಳಿಂದಾಗಿ ವಾಟ್ಸಾಪ್ ಬಳಕೆದಾರರು ಬೇರೆ ಬೇರೆ ಪರ್ಯಾಯ ಆಪ್ ಗಳನ್ನು ಹುಡುಕುತ್ತಿದ್ದಾರೆ.

ವಾಟ್ಸಪ್ ತನ್ನ ಈ ಹೊಸ ಪಾಲಿಸಿಯಲ್ಲಿ ಬಳಕೆದಾರರ ಮಾಹಿತಿಯನ್ನು ತನ್ನದೇ ಆದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವುದಾಗಿ ಹೇಳಿದೆ ಮತ್ತು ಈ ಪಾಲಿಸಿಯನ್ನು ಕಡ್ಡಾಯ ಮಾಡಿದೆ. ಈ ಪಾಲಿಸಿಯನ್ನು ಫೆಬ್ರವರಿ 8 2021 ರ ಒಳಗೆ ಒಪ್ಪಬೇಕು ಇಲ್ಲದಿದ್ದಲ್ಲಿ ವಾಟ್ಸಾಪ್ ಫೆಬ್ರವರಿ 8 ರ ನಂತರ ಕೆಲಸಮಾಡುವುದಿಲ್ಲ ಅಥವಾ ಡಿಲೀಟ್ ಆಗಬಹುದು ಎಂದು ವಾಟ್ಸಾಪ್ ತಿಳಿಸಿದೆ.

Advertisement

ನೀವು ಈಗಾಗಲೇ ಈ ಕೆಳಗಿನ ವಾಟ್ಸಾಪ್ ನೋಟಿಫಿಕೇಶನ್ ಅನ್ನು ಪಡೆದಿರುತ್ತೀರಿ. ಇಲ್ಲಿ ನೀವು ಅಗ್ರೀ ಎಂದು ಕೊಟ್ಟಿದ್ದೆ ಆದರೆ ನೀವು ನಿಮ್ಮ ಮಾಹಿತಿಯನ್ನು ವಾಟ್ಸಾಪ್ ಗೆ ಹಂಚಿಕೊಳ್ಳಲು ಅನುಮತಿ ಕೊಟ್ಟಂತೆಯೇ ಸರಿ.

whatsapp-alternate-apps-signal-telegram

ಇದಕ್ಕೆ ಒಪ್ಪದ ವಾಟ್ಸಪ್ ಬಳಕೆದಾರರರು ಬೇರೆ ಬೇರೆ ಮೆಸೇಜಿಂಗ್ ಆಪ್ ಗಳತ್ತ ಮುಖಮಾಡಿದ್ದಾರೆ. ವಾಟ್ಸಾಪ್ ನ ಈ ಅಪ್ಡೇಟ್ ಇಂದ ಟೆಲಿಗ್ರಾಂ , ಸಿಗ್ನಲ್ ನಂತ ಬಹಳಷ್ಟು ಆಪ್ ಗಳು ತಮ್ಮ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿವೆ. ಉದಾಹರಣೆಗೆ ಟೆಲಿಗ್ರಾಂ ಕೇವಲ 72 ಗಂಟೆಗಳಲ್ಲಿ 25 ಮಿಲಿಯನ್ ಬಳಕೆದಾರರನ್ನು ಹೆಚ್ಚಿಸಿಕೊಂಡಿದೆ.

ನೀವು ವಾಟ್ಸಾಪ್ ಹೊಸ ಪಾಲಿಸಿಗೆ ಒಪ್ಪದೇ ಇದ್ದಲ್ಲಿ ಪರ್ಯಾಯ ಆಪ್ ಗಳಾದ ಟೆಲಿಗ್ರಾಂ , ಸಿಗ್ನಲ್ ಅಂತಹ ಆಪ್ ಗಳನ್ನು ಉಪಯೋಗಿಸಬಹುದು.



© All Rights Reserverd 2021 @ www.smartkannada.com About Us | Contact Us | Privacy | Disclaimer |