ಏನಿದು ಜಿಯೊ ಮೀಟ್ ವಿಡಿಯೋ ಕಾಲಿಂಗ್ ಅಪ್ಲಿಕೇಶನ್ । How to use Jio meet App?

Published On May 04 2020

flipkart

Jio Meet Video Calling App in Kannada

Jio Meet App ಇನ್ನು ಅಧಿಕೃತವಾಗಿ ಘೋಷಿಸಿಲ್ಲವಾದರೂ ಅಪ್ಲಿಕೇಷನ್ ನ್ನ ಬೀಟಾ ಆವೃತ್ತಿಯನ್ನು ಗೂಗಲ್ ಪ್ಲೇ ಸ್ಟೋರ್ ಅಥವಾ  ಆಪಲ್ ಆಪ್ ಸ್ಟೋರ್ ನಲ್ಲಿ ಪಡೆಯಬಹುದು. ರಿಲಯನ್ಸ್ ಇಂಡಸ್ಟ್ರಿ ಬಳಕೆದಾರರಿಗೆ ಅನುಕೂಲವಾಗಲಿ ಎಂದು Jio ಸಂಸ್ಥೆಯವರು Jio Meet ವಿಡಿಯೋ ಕಾನ್ಫರೆನ್ಸ್ ಆಪ್ ನ್ನು  ಅಭಿವೃದ್ಧಿಪಡಿಸಿದೆ. ಪ್ರತಿಯೊಬ್ಬ ಬಳಕೆದಾರರಿಗೂ ಈ ಆಪ್ ಲಭ್ಯವಾಗುವಂತೆ ರೂಪಿಸಲಾಗಿದೆ. ಇದು ಎಲ್ಲಾ ಅಂದರೆ IOS, ಆಂಡ್ರಾಯ್ಡ್, OS, ಮ್ಯಾಕ್ ಓಸ್, ವಿಂಡೋಸ್ ಸಿಸ್ಟಮ್ಗಳಲ್ಲಿಯೂ ಜಿಯೊ ಮೀಟ್ ಆಪ್ ಲಭ್ಯವಾಗಲಿದೆ. ಇದರ ವಿಡಿಯೋ ಕರೆಗಳು ಸಂಪೂರ್ಣವಾಗಿ HD ಗುಣಮಟ್ಟದಲ್ಲಿ ಇದ್ದು ಜಿಯೋ ಮೀಟ್ ಬಳಕೆದಾರರು ಏಕಕಾಲಕ್ಕೆ 10 ಸದಸ್ಯರೊಂದಿಗೆ ವಿಡಿಯೋ  ಕಾನ್ಫರೆನ್ಸ್ ಲಿ  ಸಂಪರ್ಕಿಸಬಹುದಾಗಿದೆ. ಅಂದರೆ 1 ವಿಡಿಯೋ ಕರೆಯಲ್ಲಿ 10 ಜನರೊಂದಿಗೆ ಮಾತನಾಡುವ HD ಕ್ಲಾರಿಟಿಯುಳ್ಳ ಆಪ್ ಇದಾಗಿದೆ. 

Advertisement
Jio Meet ಅಧಿಕೃತವಾದ ನಂತರ ಅದನ್ನು ಬಳಸುವುದು ಹೇಗೆ ಎಂದು ಈ ಕೆಳಗೆ ತಿಳಿಸಲಾಗಿದೆ.
  • 1. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ನಿಂದ Jio Meet App ಆಪ್ ನ್ನು ಡೌನ್ ಲೋಡ್ ಮಾಡಿ.
  • 2. ಅಪ್ಲಿಕೇಶನ್ ನ್ನು ತೆರೆಯಿರಿ. ನಂತರ ಇ ಮೇಲ್ ಕೇಳುತ್ತದೆ ನಿಮ್ಮ ಇ ಮೇಲ್ ನ್ನು ಕೊಟ್ಟು ಲಾಗ್ ಇನ್ ಮಾಡಿ.
  • 3. ನಂತರ ಲಾಗಿನ್ ಬಟನ್ ಕೆಳಗೆ ಇರುವ ಬಲ ಮೂಲೆಯಲ್ಲಿ ಸೈನ್ ಇನ್ ಅಂತ ಟ್ಯಾಪ್ ಮಾಡಿ. 
  • 4. ಇದರ ಪರಿಶೀಲನೆಯ ಕೋಡ್ ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಹಾಗೆ ಲಾಗ್ ಇನ್ ಮಾಡಲು ನಿಮ್ಮ ಮೊಬೈಲ್ ಗೆ ಬಂದಿರುವ OTP ಯನ್ನು ನಮೂದಿಸಿ.
  • 5. ಒಮ್ಮೆ ಲಾಗ್ ಇನ್ ಮಾಡಿದ ನಂತರ ನೀವು ಆಡಿಯೋ ಹಾಗೂ ವಿಡಿಯೋ ಕರೆಗಳನ್ನು ಮಾಡಬಹುದು.
  • 6.ಈಗ ಜಿಯೋ ಮೀಟ್ ಸಂಪರ್ಕ ಹೊಂದಿದ ನಿಮ್ಮ ಸ್ನೇಹಿತರಿಗೆ ಜಿಯೋ ಮೀಟ್ ನ ಮೂಲಕ ವಿಡಿಯೋ ಕರೆಗಳನ್ನು ಮಾಡಬಹುದು.


  • © All Rights Reserverd 2021 @ www.smartkannada.com About Us | Contact Us | Privacy | Disclaimer |