ಆರೋಗ್ಯ ಸೇತು ಆಪ್: ಕೊರೋನಾ ವೈರಸ್ ಹರಡದಂತೆ ಈ ಆಪ್ ನ ಬಳಸುವುದು ಹೇಗೆ?

Published On Apr 16 2020

flipkart

how-to-use-aarogya-setu-app-in-kannada

ಆರೋಗ್ಯ ಸೇತು ಭಾರತ ಸರ್ಕಾರ ಬಿಡುಗಡೆ ಮಾಡಿರುವ ಆಪ್ . ಕೆಲವೇ ದಿನಗಳಲ್ಲಿ 50 ಮಿಲಿಯನ್ ಬಳಕೆದಾರರನ್ನು ತಲುಪಿದ ಆಪ್.ಕೊರೋನಾ ಎನ್ನುವ ಸಾಂಕ್ರಾಮಿಕ ರೋಗ ಹರಡುವುಕೆಯನ್ನು ಪತ್ತೆಹಚ್ಚಲು ಸಹಾಯಕ್ಕೆ ಬರುವ ಆಪ್ ಇದಾಗಿರುತ್ತದೆ. ಈ ಆಪ್,ಕೊರೋನಾ ಬಗ್ಗೆ ಸೂಕ್ತ ಮಾಹಿತಿ ನೀಡಲು ಮತ್ತು ವೈಯಕ್ತಿಕ ಮಟ್ಟದಲ್ಲಿ ಈ ಕೊರೋನಾ ವಿರುದ್ಧ ಹೋರಾಡಲು ನಮಗೆ ಸಹಾಯಕ್ಕೆ ಬರುತ್ತದೆ.ಈ ಆಪ್ ನಮ್ಮ ಮೊಬೈಲ್ ನಲ್ಲಿ ಇದ್ದರೆ COVID-19 ಸೋಂಕಿತರು ನಮ್ಮ ಹತ್ತಿರದಲ್ಲಿ ಸುಳಿದಾಡಿದರೆ ಅಥವಾ ನಾವು ವಾಸಿಸುವ ಪ್ರದೇಶದಲ್ಲಿ ಯಾರಾದರೂ ಕಂಡುಬಂದಲ್ಲಿ ನಮಗೆ ಒಂದು ಅಲರ್ಟ್ ಕೊಡುವ ಮೂಲಕ ನಮ್ಮನ್ನು ಎಚ್ಚರಿಸುತ್ತದೆ. ಈ ಅಪ್ 3MB ಗೂ ಕಡಿಮೆ ಇರುತ್ತದೆ.ಇದು ಆಂಡ್ರಾಯ್ಡ್ ಮತ್ತು ಐಓಸ್ ಬಳಕೆದಾರರಿಗೆ ಲಭ್ಯವಿದೆ. ಇದು ಜಿಪಿಎಸ್ ಮತ್ತು ಬ್ಲೂ ಟೂತ್ ನ ಆದಾರದ ಮೇಲೆ ಕಾರ್ಯ ನಿರ್ವಹಿಸುತ್ತದೆ.

Advertisement
how-to-use-aarogya-setu-app

ಆರೋಗ್ಯ ಸೇತು ಆಪ್ ಡೌನ್ ಲೋಡ್ ಮತ್ತು ಇನ್ಸ್ಟಾಲ್ ಮಾಡುವ ವಿಧಾನ :

 • 1.ಈ ಲಿಂಕ್ ಮೂಲಕ ಆರೋಗ್ಯ ಸೇತು ಆಪ್ ಡೌನ್ ಲೋಡ್ ಮಾಡಿ ಮತ್ತು ಇನ್ಸ್ಟಾಲ್ ಮಾಡಿ.
 • 2. ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ.
 • 3. ನೀವು ಕನ್ನಡ ಆಯ್ಕೆ ಮಾಡಿದಲ್ಲಿ ಮುಂದೆ ಎಂದು ಕೊಟ್ಟು "ಈಗಲೇ ನೋಂದಣಿ ಮಾಡಿ" ಎಂದು ಕ್ಲಿಕ್ ಮಾಡಿ.
 • 4. ಆಪ್ ಕೇಳುವ ಪರ್ಮಿಷನ್ ಗೆ "ನಾನು ಒಪ್ಪುತ್ತೇನೆ" ಎಂದು ಕೊಡಿ.
 • 5. ನಂತರ ನಿಮ್ಮ Location ತಿಳಿಯಲು Allow ಎಂದು ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿ.
 • 6. OTP ಯನ್ನು ಬರೆದ ನಂತರ ಕೆಲವು ಪ್ರಶ್ನೆಗಳನ್ನು ಉತ್ತರಿಸಿ.
 • 7. ಈ ಪ್ರಶ್ನೆಗಳು ನಿಮ್ಮ ಲಿಂಗ,ಪೂರ್ಣ ಹೆಸರು,ವಯಸ್ಸು ಮತ್ತು ಇನ್ನಿತರ ವಿಷಯಗಳಿಗೆ ಸಂಭಂದಪಟ್ಟಿರುತ್ತದೆ.
 • 8. ನಂತರ ಈ ಪ್ರಶ್ನೆಗಳ ಉತ್ತರ ಮತ್ತು ನೀವಿರುವ ಪ್ರದೇಶದ ಆದಾರದ ಮೇಲೆ ಕೊರೋನಾ ಅಪಾಯದ ಮಟ್ಟ ತೋರಿಸುತ್ತದೆ.
 • 9. ಅಷ್ಟೇ ಅಲ್ಲದೆ ಕೆಲ ಸುರಕ್ಷತಾ ಕ್ರಮಗಳ ಬಗ್ಗೆ pdf ಫೈಲ್ ಗಳು ಲಭ್ಯವಿರುತ್ತದೆ.
 • 10. ಜಿಪಿಎಸ್ ಮತ್ತು ಬ್ಲೂ ಟೂತ್ ಅವಶ್ಯಕತೆ ಯಾವಾಗಲೂ ಇರುತ್ತದೆ.
 • ನೀವು "Share App" ಎನ್ನುವ ಆಯ್ಕೆಯ ಮೂಲಕ ಬೇರೆಯವರಿಗೂ ಶೇರ್ ಮಾಡಬಹುದು.  © All Rights Reserverd 2021 @ www.smartkannada.com About Us | Contact Us | Privacy | Disclaimer |