ನಿಮ್ಮ ಮನೆಯ Electricity Bill Online ನಲ್ಲಿ View/Pay ಮಾಡುವುದು ಹೇಗೆ?

Published On May 03 2020

flipkart

How to Pay Electricity Bill Online

ನಿಮ್ಮ ಮನೆಯ Electricity Bill Online ನಲ್ಲಿ View/Pay ಮಾಡುವುದು ಹೇಗೆ?

ನಿಮ್ಮ ಮನೆಯ ವಿದ್ಯುತ್ ಬಿಲ್ ಕಟ್ಟುವುದು ಈಗ ಬಹಳ ಸುಲಭ. ನೀವು ಮನೆಯಿಂದಲೇ ವಿದ್ಯುತ್ ಬಿಲ್ ನ್ನು ಆನ್ಲೈನ್ ಮೂಲಕ ಪಾವತಿಸಬಹುದು.ಇದಕ್ಕೆ ಕೇವಲ ನಿಮ್ಮ ಸ್ಮಾರ್ಟ್ ಮೊಬೈಲ್ ನಲ್ಲಿ ಇಂಟರ್ನೆಟ್ ಇದ್ದರೆ ಸಾಕು. ನಿಮಗೆ ತಿಳಿದಿರುವಂತೆ ಕರ್ನಾಟಕದ ವಿದ್ಯುತ್ ಮಂಡಳಿಯನ್ನು ಬೆಸ್ಕಾಂ , ಮೆಸ್ಕಾಂ , ಹೆಸ್ಕಾಂ , ಜೆಸ್ಕಾಂ , ಎಂದು ವಿಕೇಂದ್ರೀಕರಿಸಲಾಗಿದೆ. ಈಗ ನಾವು ‘ವಿದ್ಯುತ್ ಬಿಲ್ ಅನ್ನು ಆನ್‌ಲೈನ್‌ನಲ್ಲಿ ಹೇಗೆ ಪಾವತಿಸುವುದು’ ಎಂಬ ವಿಷಯವನ್ನು ತಿಳಿಸುತ್ತಿದ್ದೇವೆ.

ಈಗ  ಬೆಸ್ಕಾಂ ನಲ್ಲಿ ವಿದ್ಯುತ್ ಬಿಲ್ ಪಾವತಿಸಲು, ಮೊದಲು ಬೆಸ್ಕಾಂ ಪೋರ್ಟಲ್ ನ ಮೇಲೆ ಕ್ಲಿಕ್ ಮಾಡಿ. ಆ ನಂತರ ಬೆಸ್ಕಾಂ ವೆಬ್ಸೈಟ್ ಗೆ ರೀಡೈರೆಕ್ಟ್ ಆಗುವಿರಿ. ಆ ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿ ರುವ ಕಸ್ಟಮರ್ ಐಡಿ ಅಥವಾ ಅಕೌಂಟ್ ಐಡಿ ಅನ್ನು  ನಮೂದಿಸಿ, ನಂತರ SUBMIT ಮೇಲೆ ಕ್ಲಿಕ್ ಮಾಡಿ. ನಿಮಗೆ ಮೇಲೆ ಚಿತ್ರದಲ್ಲಿ ನೀಡಿರುವಂತೆ ಸಬ್ ಡಿವಿಷನ್ ,ಆರ್ ಆರ್ ನಂಬರ್ ,ಕಸ್ಟಮರ್ ಐಡಿ ,ಕನ್ಸೂಮರ್ ನೇಮ್ ,ಮೊಬೈಲ್ ನಂಬರ್ ಮತ್ತು ಅದರ ಜೊತೆಯಲ್ಲಿ ಪಾವತಿಸಬೇಕಾದ ಹಣವೂ ಕಾಣುತ್ತದೆ. 

Advertisement
How to Pay Electricity Bill Online in Kannada

ಈಗ ನಿಮಗೆ ನಿಮ್ಮ ಮನೆಯ ವಿದ್ಯುತ್ ಬಿಲ್ ಕಟ್ಟಲು ಆಯ್ಕೆಯು ಸಿಗುತ್ತದೆ. ನೀವು ವಿದ್ಯುತ್ ಬಿಲ್ ನಲ್ಲಿ ನಿಮ್ಮ ಹೆಸರು ಮತ್ತು ವಿಳಾಸ ಸರಿ ಇದೆಯೇ ಎಂದು ಪರೀಕ್ಷಿಸಿ ಆ ನಂತರ ಬಿಲ್ ಪಾವತಿಸಿ.ಹಣವನ್ನು ಪಾವತಿಸಲು ಕ್ರೆಡಿಟ್ ಕಾರ್ಡ್,ಇಂಟರ್ನೆಟ್ ಬ್ಯಾಂಕಿಂಗ್,ಡೆಬಿಟ್ ಕಾರ್ಡ್ ಇನ್ನೂ ಅನೇಕ ಆಯ್ಕೆಗಳು ಸಿಗುತ್ತದೆ. ಈ ಆಯ್ಕೆ ಗಳಲ್ಲಿ ನಿಮಗೆ ಅನುಕೂಲವಾಗುವ ಆಯ್ಕೆಯನ್ನು ಮಾಡಿ ವಿದ್ಯುತ್ ಬಿಲ್ ಪಾವತಿ ಮಾಡಬಹುದು.ಇದೆ ರೀತಿಯಲ್ಲಿ ಹೆಸ್ಕಾಂ ,ಮೆಸ್ಕಾಂ ,ಜೆಸ್ಕಾಂ ನಲ್ಲೂ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಪಾವತಿಸಬಹುದು.© All Rights Reserverd 2021 @ www.smartkannada.com About Us | Contact Us | Privacy | Disclaimer |