ಸೇವಾ ಸಿಂಧು ವೆಬ್ ಸೈಟ್ ನಲ್ಲಿ ಇ-ಪಾಸ್ ಪಡೆಯುವುದು ಹೇಗೆ? How to Get Inter District Travel Pass in Karnataka?

Published On May 16 2020

flipkart

how-to-get-inter-district-travel-pass-in-karnataka

ಈ ಲಾಕ್ ಡೌನ್ ಸಮಯದಲ್ಲಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಪಾಸ್ ನ ಅವಶ್ಯಕತೆ ಇರುತ್ತದೆ ಆದರೆ ಪಾಸ್ ಎಲ್ಲಿ ತೆಗೆದುಕೊಳ್ಳುವುದು ಎನ್ನುವುದು ಬಹಳಷ್ಟು ಜನರಲ್ಲಿ ಇರುವಂತಹ ಒಂದು ಪ್ರಶ್ನೆಯಾಗಿದೆ.ಅದಕ್ಕಾಗಿ ಕರ್ನಾಟಕ ಸರ್ಕಾರದಿಂದ ಇರುವ ಸೇವಾ ಸಿಂದು ವೆಬ್ ಸೈಟ್  ನಲ್ಲಿ ಒಂದು ಅವಕಾಶವನ್ನು ಕಲ್ಪಿಸಲಾಗಿದೆ. ಈ ವೆಬ್ ಸೈಟ್  ನಲ್ಲಿ ನಾವು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಇ-ಪಾಸ್ ತೆಗೆದುಕೊಳ್ಳಬಹುದು. ಈ ಮುಂಚೆ ಪೊಲೀಸ್ ಇಲಾಖೆಯಿಂದ ಇದ್ದಂತಹ kspclearpass ವೆಬ್ಸೈಟ್ ಮೂಲಕ ಪಾಸನ್ನು ತೆಗೆದುಕೊಳ್ಳಬಹುದಿತ್ತು ಆದರೆ ಈಗ ಇ-ಪಾಸ್  ಪಡೆಯಲು ಸೇವಾ ಸಿಂಧು ವೆಬ್ ಸೈಟ್ ಬಳಸಬೇಕಾಗುತ್ತದೆ.

Advertisement
how-to-get-inter-district-travel-pass-in-karnataka-Two

ಇ-ಪಾಸ್ ಹೇಗೆ ಪಡೆಯಬೇಕೆಂದು ಕೆಳಗೆ ಮಾಹಿತಿ ನೀಡಲಾಗಿದೆ. ಇದರ ಮುಖಾಂತರ ನೀವು ಇ-ಪಾಸನ್ನು ಪಡೆಯಬಹುದಾಗಿದೆ.
  • ಮೊದಲಿಗೆ ಸೇವಾ ಸಿಂದು ವೆಬ್ ಸೈಟ್ ಮೇಲೆ ಕ್ಲಿಕ್ ಮಾಡಿ .
  • "ಕರ್ನಾಟಕದ ಇತರ ಜಿಲ್ಲೆಗಳಿಗೆ ಪ್ರಯಾಣಿಸಲು ಇಲ್ಲಿ ಅರ್ಜಿಸಲ್ಲಿಸಿ" ಮೇಲೆ ಕ್ಲಿಕ್ ಮಾಡಿ.
  • ಆ ನಂತರ ಅಲ್ಲಿ ಕೇಳಲಾದ ಪೂರ್ಣ ವಿವರಗಳನ್ನು ನೀಡಿ. 
  • ಇದಕ್ಕೆ ಸಂಬಂಧಪಟ್ಟಂತಹ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವಿಡಿಯೋ ನೋಡಿ.
  • ಪ್ರಯಾಣಿಕರ ಸಂಪೂರ್ಣ ವಿವರಗಳನ್ನು ನೀಡಿದ ನಂತರ SUBMIT ಮೇಲೆ ಕ್ಲಿಕ್ ಮಾಡಿ .
  • ಆ ನಂತರ ನಿಮ್ಮ್ ಮೊಬೈಲ್ ಒಂದು ರೆಫರೆನ್ಸ್ ನಂಬರ್ ಬರುತ್ತದೆ. 
  • ಲಿಂಕ್ ನಲ್ಲಿ ನಿಮಗೆ ಬಂದಿರುವ ರೆಫರೆನ್ಸ್ ನಂಬರ್ ಕೊಡುವ ಮೂಲಕ ನಿಮ್ಮ ಇ-ಪಾಸ್ ನ ಸ್ಟೇಟಸ್ ತಿಳಿದುಕೊಳ್ಳಬಹುದು.


  • © All Rights Reserverd 2021 @ www.smartkannada.com About Us | Contact Us | Privacy | Disclaimer |