How to Add Bank Account in PhonePe App? ಫೋನ್ ಪೆ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸುವುದು ಹೇಗೆ?

Published On Apr 15 2020

flipkart

How to Add bank account in PhonePe

ಫೋನ್ ಪೆ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ಖಾತೆಯನ್ನು ಸೇರಿಸುವುದು ಹೇಗೆ?

Phone Pe ಅಪ್ಲಿಕೇಶನ್ UPI ಆಧಾರಿತ ಪಾವತಿ ಅಪ್ಲಿಕೇಶನ್‌ ಆಗಿದ್ದು, ಇದನ್ನು ಉಪಯೋಗಿಸುವುದರಿಂದ ಯಾವುದೇ ಡಿಜಿಟಲ್ ಪಾವತಿಗಳನ್ನು ಮಾಡಬಹುದಾಗಿದೆ. ನಿಮ್ಮ ಬ್ಯಾಂಕ್ ಖಾತೆ ವಿವರಗಳನ್ನು ನಮೂದಿಸುವ ಮೂಲಕ ನೀವು ಫೋನ್‌ಪೇ ಖಾತೆಯನ್ನು ರಚಿಸಬಹುದು ಮತ್ತು ಯುಪಿಐ ಐಡಿ ರಚಿಸಬಹುದು. ಆದರೆ ನೀವು ಫೋನ್‌ಪೆಯಲ್ಲಿ ನಿಮ್ಮ ಬ್ಯಾಂಕ್ ಖಾತೆಯನ್ನು ಸೇರಿಸುವ ಮೊದಲು ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ನೋಂದಾಯಿಸಲಾದ ಸಿಮ್ ನಿಮ್ಮ ಮೊಬೈಲ್ ನಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಿ.

Advertisement

ಫೋನ್‌ಪೆಯಲ್ಲಿ ಬ್ಯಾಂಕ್ ಖಾತೆಯನ್ನು ಹೇಗೆ ಸೇರಿಸುವುದು.

  • 1.ನಿಮ್ಮ PhonePe ಪರದೆಯಲ್ಲಿ ಕಾಣುವ My Money ಐಕಾನ್ ಮೇಲೆ ಟ್ಯಾಪ್ ಮಾಡಿ. ಅಲ್ಲಿ ಕಾಣುವ Bank Accounts ಮೇಲೆ ಟ್ಯಾಪ್ ಮಾಡಿ.
  • 2.ನಂತರ ಕಾಣುವ ADD NEW BANK ACCOUNT ಮೇಲೆ ಟ್ಯಾಪ್ ಮಾಡಿ.
  • 3.ನಿಮ್ಮ ಬ್ಯಾಂಕ್ ನ್ನು ಆಯ್ಕೆ ಮಾಡಿ.
  • 4.ನಿಮ್ಮ ಮೊಬೈಲ್ ನಂಬರ್ ಸರಿಯಿದೆಯೇ ಎಂದು ಪರೀಕ್ಷಿಸಿಕೊಳ್ಳಿ ಅನಂತರ Continue ಕ್ಲಿಕ್ ಮಾಡಿ.
  • 5.OTP ಪರಿಶೀಲಿಸಿದ ನಂತರ SET BHIM UPI PIN ಎಂದು ಕೇಳುತ್ತದೆ. ಆನಂತರ ನಿಮ್ಮ ATM ಕಾರ್ಡ್ ನ ಕೊನೆಯ 6 ನಂಬರ್ ಮತ್ತು ATM Expiry ದಿನಾಂಕವನ್ನು ಕೇಳುತ್ತದೆ.
  • 6.ನಂತರ ಬರುವ OTP ನಮೂದಿಸಿ ಮತ್ತು ನಿಮ್ಮ ATM ಕಾರ್ಡ್ ಪಿನ್ ನಮೂದಿಸಿ.
  • 7.ನಂತರ ಬರುವ SET UPI PIN ನಮೂದಿಸಿ (ಇಲ್ಲಿ ನೀವು ಹೊಸ ಪಿನ್ ನಮೂದಿಸಬೇಕು)
  • 8.ಆನಂತರ BHIM UPI SET SUCCEFULLY ಎನ್ನುವ ಸಂದೇಶ ಬರುತ್ತದೆ.
  • ಈಗ ನೀವು ನಿಮ್ಮ ಖಾತೆಯಿಂದ ಹಣವನ್ನು ಕಳಿಸಬಹುದು.



    © All Rights Reserverd 2021 @ www.smartkannada.com About Us | Contact Us | Privacy | Disclaimer |